ಒಣಹಿಮ: ಇಂಗಾಲಾಮ್ಲ (ಅಔ2) ಅನಿಲದ ಫನರೂಪ (ಡ್ರೈ ಐಸ್). ಇದೊಂದು ಶೈತ್ಯಕಾರಕ. ಇದು ವಿಷವಲ್ಲ ಮತ್ತು ಇತರ ಪದಾರ್ಥಗಳನ್ನು ಜೀರ್ಣಿಸುವುದಿಲ್ಲ (ನಾನ್ಕರೋಸಿವ್). ಘನರೂಪದಿಂದ ನೇರವಾಗಿ ಅನಿಲವಾಗುವುದರಿಂದ ಶೇಷ (ರೆಸಿಡ್ಯೂ) ಏನೂ ಇರುವುದಿಲ್ಲ. ಇದರ ಉಷ್ಣತೆ ಬಲುಕಡಿಮೆ. ಈ ಗುಣಗಳು ಇದರ ಉಪಯುಕ್ತತೆಗೆ ಕಾರಣ. ಮಂಜುಗಡ್ಡೆಗಿಂತಲೂ ಇದು ಹೆಚ್ಚು ಪರಿಣಾಮಕಾರಿಯಾದ ಶೈತ್ಯಕಾರಕ. ಕೆಡುವ ಪದಾರ್ಥಗಳನ್ನು ಸಾಗಾಣಿಕೆಯಲ್ಲಿ ಕೆಡದಂತೆ ಸಂರಕ್ಷಿಸುವುದು, ಯಂತ್ರೋಪಕರಣಗಳ ಜೋಡಣೆ, ಪ್ರಯೋಗಶಾಲೆಯಲ್ಲಿ ಶೈತ್ಯ ವಾತಾವರಣದ ಕಲ್ಪನೆ, ಸೀರಂ ಮತ್ತು ರಕ್ತದ ಸಂರಕ್ಷಣೆ, ಮಳೆ ಕರೆಸಲು ಮೋಡಗಳ ಮೇಲೆ ಸೇಚನೆ (ಕೃತಕ ಮಳೆ) ಇತ್ಯಾದಿ ಅನೇಕ ಉಪಯೋಗಗಳುಂಟು.	(ಎನ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ